Normal Theme Yellow on Black Theme Fusia on Black Theme

ಕರ್ನಾಟಕ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ
ವೆಬ್ ಸೈಟ್ : rcmysore-portal.kar.nic.in

ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ, ಸೇವಾ ವಿವರ

ಕ್ರಸಂ ಸೇವೆ /ಪೂಜೆಯ ಹೆಸರು ಸೇವಾದರ ಸೇವೆಗಳು ನಡೆಸಬಹುದಾದ ವೇಳೆ ಪ್ರಸಾದದ ವಿವರ
1 ನಿತ್ಯ ಕಲ್ಯಾಣೋತ್ಸವ 5000 ಸಂಜೆ: 5-30 ರಿಂದ ರಾತ್ರಿ 8-30 (ನಿಗಧಿ ಪಡಿಸಿದ ದಿವಸಗಳಲ್ಲಿ ಮಾತ್ರ). 10 ಜನರಿಗೆ ಊಟ, ಶಾಲ್ಯಾನ್ನ, ಪೊಂಗಲ್, 20 ಲಾಡು, ½ ಕೆ.ಜಿ. ಕೊಬ್ಬರಿ ಸಕ್ಕರೆ, ದೇವರ ಫೋಟೋ ಮತ್ತು ವಸ್ತ್ರ.
2 ದೊಡ್ಡ ಉತ್ಸವಗಳು 2000 ಬೆಳಿಗ್ಗೆ: 10-00 ರಿಂದ 11-00 ಮತ್ತು ಸಂಜೆ: 4-30 ರಿಂದ 5-30 ರವರೆಗೆ. ವಸ್ತ್ರ, 5 ಲಾಡು, ಪೊಂಗಲ್, ಪಂಚಾಮೃತ.
3 ಪ್ರಸಾದೋತ್ಸವ 1500 ಸಂಜೆ: 7-30 ಘಂಟೆ (ವೈಶಾಖ ಮಾಸದಲ್ಲಿ ಮಾತ್ರ) ಪೊಂಗಲ್, ಪಂಚಾಮೃತ, ಶಾಲ್ಯಾನ್ನ, ಕೊಬ್ಬರಿ ಸಕ್ಕರೆ.
4 ಮಂಟಪೋತ್ಸವ 750 ಬೆಳಿಗ್ಗೆ: 10-00 ರಿಂದ 11-00 ಮತ್ತು ಸಂಜೆ: 7-30 ರಿಂದ 8-30 ರವರೆಗೆ. 2 ಲಾಡು, ಪೊಂಗಲ್, ಶಾಲ್ಯಾನ್ನ.
5 ಏಕದಶಾವಾರ ರುದ್ರಾಭಿಷೇಕ 1500 ಬೆಳಿಗ್ಗೆ: 6-30, 9-00,11-00, ಮತ್ತು 12-00 ಘಂಟೆ.ಪುನಃ ಸಂಜೆ: 6-00 ಘಂಟೆ ಮತ್ತು 7-00ಘಂಟೆಗೆ. 1 ವಸ್ತ್ರ, 10 ಲಾಡು, ಪೊಂಗಲ್, ಪಂಚಾಮೃತ ಮತ್ತು ಶಾಲ್ಯಾನ್ನ.
6 ಏಕವಾರ ರುದ್ರಾಭಿಷೇಕ 1000 ಬೆಳಿಗ್ಗೆ: 6-30, 9-00,11-00, ಮತ್ತು 12-00 ಘಂಟೆ.ಪುನಃ ಸಂಜೆ: 6-00 ಘಂಟೆ ಮತ್ತು 7-00 ಘಂಟೆಗೆ. 5 ಲಾಡು, ಪೊಂಗಲ್, ಪಂಚಾಮೃತ ಮತ್ತು ಶಾಲ್ಯಾನ್ನ.
7 ಶಾಲ್ಯಾನ್ನ ಅಭಿಷೇಕ 200 ಬೆಳಿಗ್ಗೆ: 6-30, 9-00,11-00, ಮತ್ತು 12-00 ಘಂಟೆ.ಪುನಃ ಸಂಜೆ: 6-00 ಘಂಟೆ ಮತ್ತು 7-00 ಘಂಟೆಗೆ. ಶಾಲ್ಯಾನ್ನ.
8 ಪಂಚಾಮೃತ ಅಭಿಷೇಕ 150 ಬೆಳಿಗ್ಗೆ: 6-30, 9-00,11-00, ಮತ್ತು 12-00 ಘಂಟೆ.ಪುನಃ ಸಂಜೆ: 6-00 ಘಂಟೆ ಮತ್ತು 7-00 ಘಂಟೆಗೆ. ಪಂಚಾಮೃತ.
9 ದೊಡ್ಡ ಬಸವೇಶ್ವರ ಸ್ವಾಮಿ ಅಭಿಷೇಕ 200 ಬೆಳಿಗ್ಗೆ: 6-30 ಘಂಟೆಗೆ. ಪಂಚಾಮೃತ.
10 ತುಳಸಿ ಸಹಸ್ರನಾಮ 250 ಬೆಳಿಗ್ಗೆ: 9-00 ಘಂಟೆಗೆ, 11-00 ಘಂಟೆಗೆ ಮತ್ತು ಸಂಜೆ: 6-30 ಘಂಟೆಗೆ. ಕೊಬ್ಬರಿ ಸಕ್ಕರೆ.
11 ಪೊಂಗಲ್ ನಿವೇದನೆ 150 ಬೆಳಿಗ್ಗೆ: 7-30, ಮಧ್ಯಾಹ್ನ : 12-30 ಮತ್ತು ಸಂಜೆ: 4-30 ಮತ್ತು ಸಂಜೆ: 7-30 ಘಂಟೆಗೆ ಪೊಂಗಲ್.
12 ತ್ರಿಶತಿ 100 ಬೆಳಿಗ್ಗೆ: 9-00 ಮತ್ತು 11-00 ಘಂಟೆಗೆ ಮತ್ತು ಸಂಜೆ: 7-00 ಘಂಟೆಗೆ. 2 – ಲಾಡು.
13 ಅಷ್ಟೋತ್ತರ 50 ಬೆಳಿಗ್ಗೆ: 8-30 ಘಂಟೆಯ ನಂತರ ಮತ್ತು ಸಂಜೆ: 5-30 1 – ಲಾಡು.
14 ಬೆಣ್ಣೆ ಸೇವಾ ಕಾಣಿಕೆ 250 ಬೆಳಿಗ್ಗೆ: 9-00 ಘಂಟೆಗೆ 2 – ಲಾಡು.
15 ತುಲಾಭಾರದ ಕಾಣಿಕೆ 50 ಬೆಳಿಗ್ಗೆ: 8-00 ರಿಂದ ಮಧ್ಯಾಹ್ನ: 1-00 ಮತ್ತು ಸಂಜೆ: 4-30 ರಿಂದ 8-00 ಘಂಟೆಯವರೆಗೆ. 2 – ಲಾಡು.
16 ಕಿವಿ ಚುಚ್ಚುವ ಕಾಣಿಕೆ 150 ಬೆಳಿಗ್ಗೆ: 9-00 ರಿಂದ ಮಧ್ಯಾಹ್ನ: 1-00 ರವರೆಗೆ. 2 – ಲಾಡು.
17 ನಾಮಕರಣ ಕಾಣಿಕೆ 150 ಬೆಳಿಗ್ಗೆ: 9-00 ರಿಂದ ಮಧ್ಯಾಹ್ನ: 1-00 ರವರೆಗೆ. 2 – ಲಾಡು.
18 ಅಕ್ಷರಭ್ಯಾಸದ ಕಾಣಿಕೆ 150 ಬೆಳಿಗ್ಗೆ: 9-00 ರಿಂದ ಮಧ್ಯಾಹ್ನ: 1-00 ರವರೆಗೆ. 2 – ಲಾಡು.
19 ಅನ್ನಪ್ರಾಶಾನ್ನ ಕಾಣಿಕೆ 250 ಬೆಳಿಗ್ಗೆ: 9-00 ರಿಂದ ಮಧ್ಯಾಹ್ನ: 1-00 ರವರೆಗೆ. ಶಾಲ್ಯಾನ್ನ.
20 ವಾಹನ ಪೂಜೆ:ಬಸ್ಸು / ಲಾರಿ. 150 ಬೆಳಿಗ್ಗೆ: 6-00 ರಿಂದ ರಾತ್ರಿ 8-30 ರವರೆಗೆ. 2 – ಲಾಡು.
21 ವಾಹನ ಪೂಜೆ: ಕಾರು/ ಟೆಂಪೂ/ ಟ್ರಾಕ್ಟರ್ /ಸ್ಕೂಟರ್ ಮತ್ತು ಮೋಟಾರ್ ಬೈಕ್. 100 ಬೆಳಿಗ್ಗೆ: 6-00 ರಿಂದ ರಾತ್ರಿ 8-30 ರವರೆಗೆ. 2 – ಲಾಡು.
22 ವಿಶೇಷ ದರ್ಶನ 100 ಭಾನುವಾರ / ಸೋಮವಾರ / ಹುಣ್ಣಿಮೆ ಮತ್ತು ರಜಾ ದಿವಸಗಳಲ್ಲಿ. 2 – ಲಾಡು.
23 ವಿಶೇಷ ದರ್ಶನ 50 ಭಾನುವಾರ / ಸೋಮವಾರ / ಹುಣ್ಣಿಮೆ ಮತ್ತು ರಜಾ ದಿವಸಗಳಲ್ಲಿ. 1 – ಲಾಡು.
24 ಚಿಕ್ಕ ಉತ್ಸವ (ಗುಡಿಸುತ್ತ) 1500
25 ವಸ್ತ್ರಧಾರಣೆ ಕಾಣೆಕೆ 30
26 ನಗಧಾರಣೆ ಕಾಣೆಕೆ 40

ಅನ್ನದಾಸೋಹದಲ್ಲಿ ಅನ್ನಸಂತರ್ಪಣೆ ಮಾಡಲಿಚ್ಚಿಸುವಂತ ಭಕ್ತಾದಿಗಳು ಈ ಕೆಳಕಂಡಂತೆ ನಡೆಸಬಹುದಾಗಿರುತ್ತದೆ.

1 ಅನ್ನಸಂತರ್ಪಣೆ ಸೇವೆ ಭಾನುವಾರಕ್ಕೆ ರೂ. 30,000/-
2 ಅನ್ನಸಂತರ್ಪಣೆ ಸೇವೆ ಸೋಮವಾರಕ್ಕೆ ರೂ. 30,000/-
3 ಅನ್ನಸಂತರ್ಪಣೆ ಸೇವೆ ಹುಣ್ಣಿಮೆ ದಿನಕ್ಕೆ ರೂ. 35,000/-
4 ಅನ್ನಸಂತರ್ಪಣೆ ಸೇವೆ ಮಂಗಳವಾರದಿಂದ ರೂ. 15,000/-

ಪುದುವಟ್ಟು ಸೇವೆ ವಿವರ:

1 ಮಂಗಳವಾರದಿಂದ ಶನಿವಾರದವರೆಗೆ 1 ದಿನಕ್ಕೆ ಅನ್ನಸಂತರ್ಪಣೆಗೆ ಇಡಬಹುದಾದ ಸಾಮಾನ್ಯ ಪುದುವಟ್ಟು. ರೂ. 2,00,000/-
2 ಭಾನುವಾರ / ಸೋಮವಾರ ಮತ್ತು ಹುಣ್ಣಿಮೆಯ ದಿನಗಳಲ್ಲಿ 1 ದಿನಕ್ಕೆ ಅನ್ನಸಂತರ್ಪಣೆಗೆ ಇಡಬಹುದಾದ ಪುದುವಟ್ಟು. ರೂ. 4,00,000/-
3 ಶ್ರೀಯವರ ದೇವಾಲಯದಲ್ಲಿ ದೇವರ ಸೇವೆಗೆ ಇಡಬಹುದಾದ ಪುದುವಟ್ಟು. ರೂ. 1,500/-
4 ಪುದುವಟ್ಟು ಸೇವಾ ಕಾರ್ಡ್
ದೇವಾಲಯದಲ್ಲಿ ಪ್ರತಿ ವರ್ಷ ಶಾಶ್ವತ ಪೂಜೆಯನ್ನು ಅಪೇಕ್ಷಿಸುವ ಭಕ್ತಾದಿಗಳು ಕನಿಷ್ಠ ರೂ. 1500/- ರಿಂದ ಗರಿಷ್ಠ ರೂ. 43,000/-ಗಳ ಪುದುವಟ್ಟು ಠೇವಣಿಯನ್ನು ಇರಿಸಿ ಸೇವೆ ನಡೆಸಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿಯಲ್ಲಿ ಬೆಳಿಗ್ಗೆ: 10:00 ಗಂಟೆಯಿಂದ ಸಂಜೆ: 6:00 ಗಂಟೆಯವರೆಗೆ ರಜ ದಿನಗಳಂದು ಬೆಳಿಗ್ಗೆ: 10:00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಠೇವಣಿಗಳನ್ನು ಸ್ವೀಕರಿಸಲಾಗುವುದು.
ದೇವಾಲಯದಲ್ಲಿ ತುಲಾಭಾರದ ಸೇವೆಯನ್ನು ಕಲ್ಪಿಸಿದ್ದು ತುಲಾಭಾರದ ದಿನಸಿಯನ್ನು ಸೇವಾರ್ಥದಾರರೇ ತರಬಹುದಿದೆ ಅಥವಾ ದೇವಾಲಯದ ಉಗ್ರಾಣದಿಂದಲೂ ಕ್ರಯಕ್ಕೆ ಪಡೆದು ಸೇವೆ ನಡೆಸಬಹುದಿದ್ದು ಇದಕ್ಕಾಗಿ ಅಧಿಕೃತ ರಶೀದಿ ಪಡೆಯುವುದು . ದಿನಸಿ ಪದಾರ್ಥ ಬೆಲ್ಲ,ಚಿನ್ನ,ಬೆಳ್ಳಿ, ನಗ ನಾಣ್ಯ ವಗೈರೆ ಪೂರ್ತಾದೇವಸ್ಥಾನಕ್ಕೆ ಸೇರುತ್ತದೆ.
ದೇವಾಲಯದ ವತಿಯಿಂದ ಪ್ರತಿದಿನ ಅನ್ನದಾಸೋಹ ನಡೆಸಲಾಗುತ್ತಿದ್ದು, ನಿತ್ಯ ಅನ್ನದಾಸೋಹಕ್ಕೆ ತಮ್ಮ ಉದರ ದೇಣಿಗೆಯನ್ನು ನಗದು, ಚೆಕ್, ಡಿ.ಡಿ. ಅಥವಾ ದಿನಸಿ ಪದಾರ್ಥಗಳ ಮೂಲಕ ಕೊಡಬಹುದಾಗಿದೆ. ಇದಕ್ಕಾಗಿ ಅಧಿಕೃತ ರಶೀದಿಯನ್ನು ನೀಡಲಾಗುವುದು.
ಪ್ರತಿ ವರ್ಷ ನಿರ್ಧಿಷ್ಠ ದಿನದಂದು ಅನ್ನದಾಸೋಹ ಸೇವೆ ನಡೆಸಲು ಇಚ್ಛೆ ಪಡುವ ಭಕ್ತಾದಿಗಳು ಸಾಮಾನ್ಯ ಒಂದು ದಿನದ ಸೇವೆಗೆ ರೂ. 2.00 ಲಕ್ಷ ಭಾನುವಾರ/ ಸೋಮವಾರ / ಹುಣ್ಣಿಮೆ ದಿನಗಳ ಸೇವೆಗೆ ರೂ. 4.00 ಲಕ್ಷಗಳ ದಾಸೋಹ ಪುದುವಟ್ಟು ಠೇವಣಿ ಇರಿಸಬಹುದಾಗಿದೆ.
ದಾಸೋಹದಲ್ಲಿ ಅನ್ನಸಂತರ್ಪಣೆ ಸೇವೆಯನ್ನು ನಡೆಸುವ ಭಕ್ತಾದಿಗಳು ಭಾನುವಾರ ಅಥವಾ ಸೋಮವಾರ ದಿವಸಕ್ಕೆ ರೂ. 30,000/- ಹುಣ್ಣಿಮೆ ದಿನಕ್ಕೆ ರೂ. 35,000/- ಮತ್ತು ಮಂಗಳವಾರದಿಂದ ಶನಿವಾರದವರೆಗೆ ರೂ. 15,000/-ಗಳ ಸೇವಾ ಶುಲ್ಕ ಪಾವತಿಸಿ ಅಧಿಕೃತ ರಶೀತಿ ಪಡೆದುಕೊಂಡು ಸೇವೆಯ ನಡೆಸಬಹುದಾಗಿದೆ.
ಭಕ್ತಾದಿಗಳ ಹಾಗೂ ಯಾತ್ರಾರ್ಥಿಗಳ ವಾಸ್ತವ್ಯಕ್ಕೆ ಶ್ರೀ ಗಿರಿಜ ಕಲ್ಯಾಣ ಮಂದಿರದಲ್ಲಿ 28 ಕೊಠಡಿಗಳು (ಇದರಲ್ಲಿ 4 ಕೊಠಡಿಗಳು ಹವಾ ನಿಯಂತ್ರಣ ಕೊಠಡಿಗಳಾಗಿರುತ್ತದೆ). ಡಾರ್ಮೆಟರಿಯಲ್ಲಿ 31 ಕೊಠಡಿಗಳು ಮತ್ತು 4 ವಿ.ಐ.ಪಿ. ಅತಿಥಿ ಗೃಹಗಳು ಇದ್ದು, ಇವುಗಳ ಉಪಯೋಗಕ್ಕೆ ಬೆಂಗಳೂರು –1 ಕೇಂದ್ರದ ಮೂಲಕ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಿದ್ದು, ಭಕ್ತಾದಿಗಳು ಸದುಪಯೋಗ ಪಡೆಯಬಹುದಾಗಿದೆ.
ದೇವಲಯಕ್ಕೆ ಸಂದಾಯ ಮಾಡುವ ಯಾವುದೇ ಹರಕೆ ಕಾಣಿಕೆ ಇತ್ಯಾದಿ ಪದಾರ್ಥಗಳನ್ನು ಕಾರ್ಯನಿರ್ವಾಹಕ ಅಧಿಕಾರಿರವರ ಆಡಳಿತ ಕಛೇರಿಗೆ ಅಥವಾ ದೇವಾಲಯದಲ್ಲಿರುವ ಸೇವಾ ಕೌಂಟರ್‍ನಲ್ಲಿ ಪವತಿಸಿ ಅಧಿಕೃತ ರಶೀದಿ ಪಡೆಯುವುದು.
ದೇವಾಲಯದಲ್ಲಿ ನಿತ್ಯ ಕಲ್ಯಾಣೋತ್ಸವ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿದ್ದು, ಇದಕ್ಕಾಗಿ ದೇವಾಲಯದ ಪುರೋಹಿತರು ನಿಗಧಿ ಪಡಿಸುವ ದಿನಾಂಕಗಳಂದು ಈ ಸೇವೆ ನಡೆಸಬಹುದಿದ್ದು, ಇದಕ್ಕಾಗಿ ಒಂದುವಾರ ಮುಂಚಿತವಾಗಿಯೇ ರೂ. 3,000/-ಗಳನ್ನು ನಗದಾಗಿ ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನ ಬೇಡಿಕೆ ಹುಂಡಿಯನ್ನು ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರಿನಲ್ಲಿ ಪಡೆದು ಸಲ್ಲಿಸಿ ಸೇವೆ ಕಾಯ್ದಿರಿಸಬಹುದಾಗಿದೆ. ಈ ಸೇವೆ ಮಾಡಿಸುವ ಸೇವಾರ್ಥದಾರರು ಸೇರಿದಂತೆ 10 ಜನರಿಗೆ ಉಚಿತ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ.
ಸೂಚನೆ :

ಭಕ್ತಾದಿಗಳ ಉಪಯೋಗಕ್ಕಾಗಿ ಶ್ರೀ ಶ್ರೀಯವರಿಗೆ ಸಲ್ಲಿಸುವ ಸೇವೆಗಳು ಮತ್ತು ವಾಸ್ತವ್ಯಕ್ಕೆ ಕೊಠಡಿಗಳನ್ನು ಅಂತರ್ಜಾಲದ ಮೂಲಕ ಕಾಯ್ದಿರಿಸಲು ಹಾಗೂ ದೇಣಿಗೆಗಳನ್ನು ಸ್ವೀಕರಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

ಈ ಸೌಲಭ್ಯಗಳನ್ನು ನಗದು ಅಥವಾ ಹಣ ಪಾವತಿ ಅಥವಾ ಕ್ರೆಡಿಟ್ ಕಾರ್ಡ್ ಮುಖಾಂತರ ಬೆಂಗಳೂರು ಓನ್ ಅಥವಾ ಕರ್ನಾಟಕ ಓನ್ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ.

ಅಂತರ್ಜಾಲದ ವ್ಯವಸ್ಥೆಯು “Karnatakatemple yatra.kar.nic.in” ರಲ್ಲಿ ದೊರೆಯಲಿದೆ.

ಸೇವೆಗಳನ್ನು ನಡೆಸಲು ಇಚ್ಛಿಸುವ ಭಕ್ತಾದಿಗಳು ದೇವಾಲಯದ ಒಳಭಾಗದಲ್ಲಿರುವ ಸೇವಾ ಕೌಂಟರ್‍ನಲ್ಲಿ ಹಣ ಪಾವತಿಸಿ ಅಧಿಕೃತ ರಶೀತಿಯನ್ನು ಪಡೆದು ಸೇವಾ ಮಾಡಿಸತಕ್ಕದ್ದು.

ಅಭಿಷೇಕ / ಅಷ್ಟೋತ್ತರ ಸೇವಾ ಮಾಡಿಸಲಿಚ್ಛಿಸುವಂತಹ ಭಕ್ತಾದಿಗಳು ಅಭಿಷೇಕ ವೇಳೆ ನಿಗಧಿಯಾಗಿರುವ ವೇಳೆಗಿಂತ ಅರ್ಧ ಘಂಟೆ ಮುಂಚಿತವಾಗಿ ಅಧಿಕೃತ ರಶೀದಿ ನೀಡಲಾಗುವುದು, ಭಕ್ತಾದಿಗಳು ಸದುಪಯೋಗ ಪಡಿಸಿಕೊಳ್ಳತಕ್ಕದ್ದು.

ಅಧಿಕೃತ ರಶೀತಿಯನ್ನು ಪಡೆಯದೆ ಅನಧೀಕೃತವಾಗಿ ನಡೆಸುವ ಸೇವೆಗಳ ಹಣ ದೇವಾಲಯದ ನಿಧಿಗೆ ಸಂದಾಯವಾಗುವುದಿಲ್ಲ.

ಉಪಯುಕ್ತ ಮಾಹಿತಿ

ವಿಶೇಷ ದಿನಗಳಂದು ಹಾಗೂ ಸೋಮವಾರಗಳಂದು ದೇವಸ್ಥಾನವು ಬೆಳಿಗ್ಗೆ 6:00 AM ರಿಂದ ರಾತ್ರಿ 8:30 PM ರವರೆಗೆ ತೆರೆದಿರುತ್ತದೆ.

ಜಾತ್ರೆ

  • ಮಹಾ ಶಿವರಾತ್ರಿ
  • ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ
  • ಚಿಕ್ಕಜಾತ್ರೆ
  • ದೊಡ್ಡಜಾತ್ರೆ
  • ತೆಪ್ಪೋತ್ಸವ
  • ಲಕ್ಷದೀಪೋತ್ಸವ