ಕರ್ನಾಟಕ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ
ವೆಬ್ ಸೈಟ್ : rcmysore-portal.kar.nic.in

ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ, ನಂಜನಗೂಡು

ಶೌನಕಾದಿ ಮಹರ್ಷಿಗಳಿಗೆ ಸೂತಪುರಾಣಿಕರು ಈ ಕ್ಷೇತ್ರ ಮಹಿಮೆಯನ್ನು ವರ್ಣಿಸಿದರು. ಅದು ಹೇಗೆಂದರೆ: ನಂಜನಗೂಡು ಮೈಸೂರು ಜಿಲ್ಲೆಯ ಒಂದು ಪುಣ್ಯ ಪವಿತ್ರ ಕ್ಷೇತ್ರ, ಈ ಸ್ವಾಮಿಯನ್ನು ನಂಜುಂಡೇಶ್ವರನೆಂದು ಕೂಡ ಕರೆಯುತ್ತಾರೆ. ಮೈಸೂರಿನಿಂದ ಕೇವಲ 22 ಕೀ.ಮೀ. ದೂರದಲ್ಲಿರುವ ಈ ಕ್ಷೇತ್ರಕ್ಕೆ ಪ್ರತೀ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಕ್ಷೇತ್ರದ ಮಹಿಮೆ ಬಹಳ ಪುರಾಣದಲ್ಲಿ ಸ್ಕಂದ ಪುರಾಣದಲ್ಲಿ ವರ್ಣಿಸಿದ್ದಾರೆ.

ಪಾರ್ವತೀಪರಮೇಶ್ವರರು ಸಂಚಾರಮಾಡುತ್ತಿರುವಾಗ್ಗೆ, ಶ್ರೀ ಪಾರ್ವತಮ್ಮನವರು ತಮಗೆ ಸುಖದಾಯಕವಾದ ಕ್ಷೇತ್ರಗಳಲ್ಲಿ ಪರಮಪವಿತ್ರವಾದ ಮತ್ತು ಪರಮೋತ್ಕೃಷ್ಟವಾದ ಕ್ಷೇತ್ರವಾವುದೆಂದು ಕೇಳಿದ್ದಕ್ಕೆ, ಕಪಿಲಾ ಕೌಂಡಿನೀ ನದಿಗಳ ಸಂಗಮಸ್ಥಳವಾದ ಗರಳಪುರಿ ಕ್ಷೇತ್ರವೆ ಪರಮಪಾವನವಾದ ಕ್ಷೇತ್ರವು ಕೇಶೀರಾಕ್ಷಸಸಂಹಾರಕಾಲಕ್ಕೆ ಅಲ್ಲಿಗೆ ಹೋಗಿ ನೋಡೋಣವೆಂದು ಸ್ವಾಮಿಯವರು ಹೇಳಿದರು.

ತ್ರಿಯಂಬಕ ರಾಕ್ಷಸನ ಮಗನಾದ ಕೇಶೀಯೆಂಬ ರಾಕ್ಷಸನು ಮಹಾಗರ್ವಿಯಾಗಿ ದೇವತೆಗಳನ್ನು ಋಷಿಗಳನ್ನು ಬಹಳವಾಗಿ ಹಿಂಸಿಸುತ್ತಾ, ಯಾಗಾದಿ ಕರ್ಮಗಳನ್ನು ಕೆಡಿಸುತ್ತಾ ಇದ್ದುದರಿಂದ ದೇವಗಣಗಳು ಬ್ರಹ್ಮನಲ್ಲಿಯೂ, ವಿಷ್ಣುವಿನಲ್ಲಿಯೂ ಮೊರೆಯಿಡಲು ಈ ರಾಕ್ಷಸ ಸಂಹಾರವು ಮಹದೇವನಿಗೆ ಹೊರತು ತಮಗಾಗಲೀ ಮತ್ತಾರಿಗಾಗಲೀ ಸಾಧ್ಯವಿಲ್ಲವೆಂದು ತಿಳಿಸಿ, ಅವರೊಡನೆ ತಾವು ಗಿರಿಜಾ ವಲ್ಲಭನ ಬಳಿಗೆ ಹೊರಟು ಕೇಳಿಕೊಳ್ಳಲು ಪರಮೇಶ್ವರನು ಅವರುಗಳಿಗೆಲ್ಲಾ ಕಪಿಲಾ ಕೌಂಡಿನಿ ಸಂಗಮದಲ್ಲಿ ಯಜ್ಞವನ್ನು ನೆರವೇರಿಸುವಂತೆ ಅಪ್ಪಣೆಕೊಟ್ಟನು. ಯಜ್ಞವನ್ನು ನಡೆಸುತ್ತಿರುವಲ್ಲಿ ಹವಿಸ್ಸನ್ನು ತಿನ್ನುವುದಕ್ಕೂ ಯಜ್ಞವನ್ನು ಕೆಡಿಸುವುದಕ್ಕೂ ಬಂದ ಕೇಶೀರಾಕ್ಷಸನನ್ನು ಪರಮೇಶ್ವರನು ಆ ಯಜ್ಞಕುಂಡದಲ್ಲಿಯೇ ಹಾಕಿ ಸೋಂಕಿದ ಎಲ್ಲರನ್ನು ಕೊಲ್ಲತೊಡಗಿತು. ಅದನ್ನು ಸಹ ಲೋಕೋಪಕ್ಕಾರಕ್ಕಾಗಿ ಸದಾಶಿವನೆ ಸವಿದನು. ಇದರಿಂದ ಪರಮೇಶ್ವರನಿಗೆ “ ಶ್ರೀ ಕಂಠ “ “ ನಂಜುಂಡ “ ಎಂಬ ಹೆಸರುಗಳುಂಟಾದುವು.

ಹೆಚ್ಚಿನ ಮಾಹಿತಿ. . .

 

ಉಪಯುಕ್ತ ಮಾಹಿತಿ

ವಿಶೇಷ ದಿನಗಳಂದು ಹಾಗೂ ಸೋಮವಾರಗಳಂದು ದೇವಸ್ಥಾನವು ಬೆಳಿಗ್ಗೆ 6:00 AM ರಿಂದ ರಾತ್ರಿ 8:30 PM ರವರೆಗೆ ತೆರೆದಿರುತ್ತದೆ.