Normal Theme Yellow on Black Theme Fusia on Black Theme

ಕರ್ನಾಟಕ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ
ವೆಬ್ ಸೈಟ್ : rcmysore-portal.kar.nic.in
ಕ್ರ.ಸಂ ಸೌಲಭ್ಯಗಳು
1 ಭಕ್ತಾದಿಗಳ ಅನುಕೂಲಕ್ಕಾಗಿ ಕಪಿಲಾ ನದಿ ದಡದಲ್ಲಿ ಶೌಚಾಲಯಗಳು, ಸ್ತ್ರೀಯರು ಸ್ನಾನ ಮಾಡಿದ ನಂತರ ವಸ್ತ್ರ ಬದಲಾಯಿಸಿಕೊಳ್ಳುವ ಕೊಠಡಿಗಳ ಸೌಲಭ್ಯ ಕಲ್ಪಿಸಲಾಗಿದೆ.
2 ನದಿ ತೀರದಲ್ಲಿ ಸ್ನಾನ ಮಾಡುವ ಭಕ್ತಾದಿಗಳು ತಮ್ಮ ಲಗೇಜುಗಳನ್ನು ಜೋಪಾನವಾಗಿ ಇರಿಸಿಕೊಳ್ಳಲು ದೇವಾಲಯದ ವತಿಯಿಂದ ಉಚಿತವಾಗಿ ಶುಲ್ಕ ರಹಿತ ಸೇವೆಯ ಲಗೇಜು ಕೊಠಡಿಯ ಸೌಲಭ್ಯ ಕಲ್ಪಿಸಾಲಿದೆ.
3 ಸಮಗ್ರ ಅಭಿವೃದ್ಧಿ ಯೋಜನಾ ಪ್ರದೇಶದಲ್ಲಿ ಬೃಹತ್ ಯೋಗೇಶ್ವರಮೂರ್ತಿಯ ಬಳಿ ಯಾತ್ರಾರ್ಥಿಗಳ ಉಪಯೋಗಕ್ಕೆ ಪೇ & ಯೂಸ್ ಮೇರೆ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
4 ದೇವಾಲಯಕ್ಕೆ ಬರುವ ಭಕ್ತಾದಿಗಳು ಉಪಯೋಗಕ್ಕೆ ಅವರು ತರುವ ಲಗೇಜುಗಳನ್ನು ಜೋಪಾನವಾಗಿ ಇರಿಸಿಕೊಳ್ಳಲು ಉಚಿತವಾಗಿ ಶುಲ್ಕ ರಹಿತ ಲಗ್ಗೇಜು ಕೊಠಡಿ ಸೌಲಭ್ಯವನ್ನು ಕಲ್ಯಾಣಿ ಬಳಿ ಕಲ್ಪಿಸಲಾಗಿದೆ.
5 ದೇವಾಲಯಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ದೇವಾಲಯದ ಬಳಿಯಿಂದ ಮೈಸೂರಿಗೆ ಹೋಗುವ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು 5 ಬಸ್ಸುಗಳನ್ನು ನಿಯೋಜಿಸಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
6 ಕೆ.ಎಸ್.ಆರ್.ಟಿ.ಸಿ ಸಂಸ್ಥೆಯವರಿಂದ ನಂಜನಗೂಡಿಗೆ ಬರುವ ಭಕ್ತಾದಿಗಳಿಗೆ 10 ನಿಮಿಷಕ್ಕೊಂದು ಬಸ್ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
7 ಶ್ರೀ ಶ್ರೀಯವರ ದೇವಾಲಯದ ಪ್ರದೇಶವನ್ನು “ ಪ್ಲಾಸ್ಟಿಕ್ ಮುಕ್ತ ” ಪ್ರದೇಶವನ್ನಾಗಿ ಮಾಡಲಾಗಿದ್ದು, ಭಕ್ತಾದಿಗಳು ಇದನ್ನು ಪಾಲಿಸುವಂತೆ ವಿನಂತಿಸಲಾಗಿದೆ.
8 ಶ್ರೀ ಶ್ರೀಯವರ ದೇವಾಲಯಕ್ಕೆ ದ್ವಿ ಚಕ್ರ / ನಾಲ್ಕು ಚಕ್ರ ವಾಹನಗಳಲ್ಲಿ ಬರುವಂತಹ ಭಕ್ತಾದಿಗಳಿಗೆ ದೇವಾಲಯದ ಸುತ್ತಮುತ್ತಲಿನ ವಾಹನ ನಿಲ್ದಾಣದ ಪ್ರದೇಶದಲ್ಲಿ ನಿಗಧಿ ಪಡಿಸಿರುವ ನಗದು ನೀಡಿ, ವಾಹನ ನಿಲ್ದಾಣವನ್ನು ಉಪಯೋಗಿಸಿಕೊಳ್ಳ ಬಹುದು.
9 ಶ್ರೀ ಶ್ರೀಯವರ ದೇವಾಲಯಕ್ಕೆ ಬರುವಂತಹ ಭಕ್ತಾದಿಗಳಿಗೆ ಅಲ್ಲಿ ತಂಗಲು ಶ್ರೀ ಗಿರಿಜಾ ಕಲ್ಯಾಣ ಮಂದಿರ, ಡಾರ್ಮೆಟರಿ, ವಿ.ಐ.ಪಿ ಕಾಟೇಜ್‍ಗಳನ್ನು ಅತೀ ಕಡಿಮೆ ದರದಲ್ಲಿ ನಿಗಧಿ ಪಡಿಸಿ, ಅಧಿಕೃತ ರಶೀದಿ ಸಮೇತ ಭಕ್ತಾದಿಗಳಿಗೆ ನೀಡಲಾಗುತ್ತಿದೆ.
10 ಶ್ರೀ ಶ್ರೀಯವರ ದೇವಾಲಯದ ಸುರಕ್ಷತೆಗಾಗಿ ದೇವಾಲಯದ ಪ್ರದೇಶದಲ್ಲಿ ಒಂದು ಪೋಲಿಸ್ “ಔಟ್‍ಪೋಸ್ಟ್” ಪೋಲಿಸ್ ಸ್ಟೇಷನ್ ತೆರೆಲಾಗಿದ್ದು, ಭಕ್ತಾದಿಗಳು ಅದರ ಸದುಪಯೋಗ ಪಡಿಸಿಕೊಳ್ಳ-ಬಹುದಾಗಿದೆ.
11 ಶ್ರೀ ಶ್ರೀಯವರ ದೇವಾಲಯದಲ್ಲಿ ಪ್ರಸಾದ ರೂಪವಾಗಿ “ಲಾಡು ಪ್ರಸಾದ, ಕಲ್ಲು ಸಕ್ಕರೆ ಖರ್ಜೂರ ಪ್ರಸಾದ, ತೀರ್ಥ ಪ್ರಸಾದ ಹಾಗೂ ಮಹಾಪ್ರಸಾದ“ ಇವುಗಳನ್ನು ದೇವಾಲಯದ ಒಳ ಹಾಗೂ ಹೊರಾವಣಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳ ಬಹುದು.
12 ದೇವಾಲಯದ ಎಲ್ಲಾ ಆವರಣಗಳಾದ, ದೇವಾಲಯದ ಒಳಾವರಣ/ ಹೊರಾವರಣ/ ಡಾರ್ಮೆಟರಿ/ ದಾಸೋಹ ಭವನ / ಸಮಗ್ರ ಅಭಿವೃದ್ಧಿ ಪ್ರದೇಶಗಳಲ್ಲಿ ಶುಚಿ-ರುಚಿಕರ ತಂಪಾದ ಆರ್.ಓ. ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಉಪಯುಕ್ತ ಮಾಹಿತಿ

ವಿಶೇಷ ದಿನಗಳಂದು ಹಾಗೂ ಸೋಮವಾರಗಳಂದು ದೇವಸ್ಥಾನವು ಬೆಳಿಗ್ಗೆ 6:00 AM ರಿಂದ ರಾತ್ರಿ 8:30 PM ರವರೆಗೆ ತೆರೆದಿರುತ್ತದೆ.

ಜಾತ್ರೆ

  • ಮಹಾ ಶಿವರಾತ್ರಿ
  • ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ
  • ಚಿಕ್ಕಜಾತ್ರೆ
  • ದೊಡ್ಡಜಾತ್ರೆ
  • ತೆಪ್ಪೋತ್ಸವ
  • ಲಕ್ಷದೀಪೋತ್ಸವ
Home|Sitemap|Screen Reader Access

Screen Reader Access


Screen Reader Website Free/Commercial
Non Visual Desktop Access (NVDA) http://www.nvda-project.org/ (External website that opens in a new window) Free
System Access To Go http://www.satogo.com/ (External website that opens in a new window) Free
Hal http://www.yourdolphin.co.uk/productdetail.asp?id=5 (External website that opens in a new window) Commercial
JAWS http://www.freedomscientific.com/jaws-hq.asp (External website that opens in a new window) Commercial
Supernova http://www.yourdolphin.co.uk/productdetail.asp?id=1 (External website that opens in a new window) Commercial
Window-Eyes http://www.gwmicro.com/Window-Eyes/ (External website that opens in a new window) Commercial